ಒಂದೇ ಕುಟುಂಬದ 6 ಜನರಿಂದ ಜೈನ ದೀಕ್ಷೆ ಸ್ವೀಕಾರ!
Lifestyle JAINISM

Posted by admin on 2023-05-10 15:07:20 |

Share: Facebook | Twitter | Whatsapp | Linkedin


ಒಂದೇ ಕುಟುಂಬದ 6 ಜನರಿಂದ ಜೈನ ದೀಕ್ಷೆ ಸ್ವೀಕಾರ!

ರಾಜಸ್ಥಾನ್: ಪ್ರಸ್ತುತ ದಿನಗಳಲ್ಲಿ ಪ್ರತಿಯೊಬ್ಬರು ಐಷಾರಾಮಿ ಜೀವನ ಮತ್ತು ಸೌಕರ್ಯಗಳ ಬಯಸುತ್ತಾರೆ. ಹಣ, ಸಂಪತ್ತನ್ನು ಗಳಿಸಲು ಸಾಕಷ್ಟು ಪರಿಶ್ರಮ ಪಡುತ್ತಾರೆ. ಆದರೆ ಕೆಲವೊಬ್ಬರು ಈ ನೀತಿಗೆ ವಿರುದ್ಧವಾಗಿರುತ್ತಾರೆ. ತಮ್ಮ ಬಳಿ ಅಪರಾ ಸಂಪತ್ತು, ಐಶ್ವರ್ಯ ಇದ್ದರೂ ನೆಮ್ಮದಿಗಾಗಿ ಎಲ್ಲವನ್ನೂತ್ಯಾಗ ಮಾಡಲು ಸಿದ್ಧರಿರುತ್ತಾರೆ. ತಮ್ಮ ಧರ್ಮದ ಧ್ವಜವನ್ನು ಎತ್ತರಕ್ಕೆ ಹಾರಿಸಬೇಕೆಂದು ಕೆಲವರು ನಿರ್ಧರಿಸಿದ್ದಾರೆ.

ಭಗವಾನ್ ಮಹಾವೀರರ ಜನ್ಮದಿನದಂದು ಒಂದೇ ಕುಟುಂಬದದಿಂದ 6 ಮಂದಿ ಲೌಕಿಕ ಭೋಗ ಜೀವನವನ್ನು ತೊರೆದು ಸನ್ಯಾಸತ್ವ ಸ್ವೀಕರಿಸಿದ್ದಾರೆ. ಈ ಮೂಲಕ ಕುಟುಂಬದ ಮೂರು ಪೀಳಿಗೆಯವರು ಸನ್ಯಾಸ ದೀಕ್ಷೆ ಪಡೆದಂತಾಗಿದೆ. ವಿಭಿನ್ನ ಕಾಲಘಟ್ಟದಲ್ಲಿ ಧರ್ಮದ ಆಚರಣೆಯಲ್ಲಿ , ಆಧ್ಯಾತ್ಮದಲ್ಲಿ ನೆಮ್ಮದಿ ಸಾಧ್ಯವೆಂದು ಎಲ್ಲರೂ ಜೈನ ದೀಕ್ಷೆ ಪಡೆದುಕೊಂಡಿದ್ದಾರೆ.

ಭಗವಾನ್ ಮಹಾವೀರರ 2622ನೇ ಜನ್ಮದಿನದಂದು ಒಂದೇ ಕುಟುಂಬದದಿಂದ 6 ಮಂದಿ ಲೌಕಿಕ ಭೋಗ ಜೀವನವನ್ನು ತೊರೆದು ಸನ್ಯಾಸತ್ವ ಸ್ವೀಕರಿಸಿದ್ದಾರೆ. ಈ ಮೂಲಕ ಕುಟುಂಬದ ಮೂರು ಪೀಳಿಗೆಯವರು ಸನ್ಯಾಸ ಧೀಕ್ಷೆ ಪಡೆದಂತಾಗಿದೆ.

  • ಬಾರ್ಮರ್‌ನಲ್ಲಿರುವ ಮೊಕಲ್ಸರ್‌ನ ಈ ಕುಟುಂಬದಲ್ಲಿ 1973 ರಲ್ಲಿ ಮೊದಲ ಬಾರಿಗೆ ದೀಕ್ಷೆ ನಡೆದಿತ್ತು. ಡಿಸೆಂಬರ್ 2022 ರಲ್ಲಿ ಕುಟುಂಬದ ಕಿರಿಯ ಸದಸ್ಯೆ ಆಧ್ಯಾತ್ಮದ ಕಡೆ ಆಸಕ್ತಿ ತೋರಿಸಿ ಸನ್ಯಾಸ ಮಾರ್ಗವನ್ನು ಆರಿಸಿಕೊಂಡಿದ್ದಾರೆ.
  • ಬಾರ್ಮರ್‌ನಲ್ಲಿರುವ ಮೊಕಲ್ಸರ್‌ನ ಈ ಕುಟುಂಬದಲ್ಲಿ 1973 ರಲ್ಲಿ ಮೊದಲ ಬಾರಿಗೆ ದೀಕ್ಷೆ ನಡೆದಿತ್ತು. ಡಿಸೆಂಬರ್ 2022 ರಲ್ಲಿ ಕುಟುಂಬದ ಕಿರಿಯ ಸದಸ್ಯೆ ಆಧ್ಯಾತ್ಮದ ಕಡೆ ಆಸಕ್ತಿ ತೋರಿಸಿ ಸನ್ಯಾಸ ಮಾರ್ಗವನ್ನು ಆರಿಸಿಕೊಂಡಿದ್ದಾರೆ.
  • 1988ರಲ್ಲಿ ಇದೇ ಕುಟುಂವದ ಎರಡನೇ ಪೀಳಿಗೆಯ ಜೀನ್​ ಜೇಠ್​ ಎಂಬುವವರು ಜೈನ ದೀಕ್ಷೆ ಪಡೆಯುವ ಮೂಲಕ ತಮ್ಮ ಹೆಸರನ್ನು ನೀಲಾಂಜನ ಶ್ರೀ ಎಂದು ಬದಲಿಸಿಕೊಂಡರು. 2003 ರಲ್ಲಿ ಅಶೋಕ್ ಎಂಬುವವರು ದೀಕ್ಷೆ ಪಡೆಯುವ ಮೂಲಕ ಮಣಿತ್​ಪ್ರಭ್ ಎಂದು ಹೆಸರನ್ನು ಬದಲಾಯಿಸಿಕೊಂಡರು.
  • ಇದೀಗ ಕಳೆದ ವರ್ಷದ 21 ವರ್ಷದ ಆರಾಧ್ಯ ಶ್ರೀ ಕೊನೆಯವರಾಗಿ ಜೈನ ಧರ್ಮದ ದೀಕ್ಷೆ ಪಡೆದಿದ್ದಾರೆ. ಈ ಮೂಲಕ ಕುಟುಂಬದ ಎಲ್ಲರೂ ಜೈನ ಸನ್ಯಾಸಿಗಳಾಗಿದ್ದಾರೆ. ಮೂರು ತಲೆಮಾರುಗಳಲ್ಲಿ ಭಗವಂತ ರತ್ನಮಾಲಾ ಶ್ರೀಗಳು 82 ವರ್ಷ ವಯಸ್ಸಿನವರಾಗಿದ್ದರೆ, 21 ವರ್ಷದ ಸಾಧ್ವಿ ಭವಂತ ಅತ್ಯಂತ ಕಿರಿಯ ಸನ್ಯಾಸಿಯಾಗಿದ್ದಾರೆ.

ಕೇವಲ ಬಾರ್ಮರ್ ಮಾತ್ರವಲ್ಲದೆ, ಇಡೀ ಜೈಪುರ ಪ್ರಾಂತ್ಯದಲ್ಲಿ ಒಂದೇ ಕುಟುಂಬದ ಮೂರು ತಲೆಮಾರಿನವರು ಧರ್ಮದ ಧ್ವಜವನ್ನು ಎತ್ತರದಲ್ಲಿ ಹಾರಿಸಲು ಜೈನ ದೀಕ್ಷೆ ಪಡೆದ ಏಕೈಕ ಕುಟುಂಬವಾಗಿದೆ. ಈ ಕುಟುಂಬ ಚೆನ್ನೈ, ಮುಂಬೈ ಸೇರಿದಂತೆ ಹಲವು ಕಡೆ ಚಾತುರ್ಮಾಸ್​ವನ್ನು ಕೈಗೊಳ್ಳುತ್ತಿದೆ.

Search
Recent News
Leave a Comment:

ಕೃತಿಸ್ವಾಮ್ಯ © ಜೈನ ವಾಣಿ 2024