ರಾಯಗಡದ ಜೈನ ಸಮುದಾಯದ ಹೆಮ್ಮೆಯ ಸುಪುತ್ರಿ ಯಾಶಿ ಜೈನರಿಂದ ಮೌಂಟ್ ಎವೆರೆಸ್ಟನ ಯಶಸ್ವಿ ಶಿಖರಾರೋಹಣ
Adventure JAINISM

Posted by admin on 2023-05-18 17:26:26 |

Share: Facebook | Twitter | Whatsapp | Linkedin


ರಾಯಗಡದ ಜೈನ ಸಮುದಾಯದ ಹೆಮ್ಮೆಯ ಸುಪುತ್ರಿ ಯಾಶಿ ಜೈನರಿಂದ ಮೌಂಟ್ ಎವೆರೆಸ್ಟನ ಯಶಸ್ವಿ ಶಿಖರಾರೋಹಣ

ರಾಯಗಡದ ಪರ್ವತಾರೋಹಿ ಯಾಶಿ ಜೈನ್ ರವರು ಯಶಸ್ವಿಯಾಗಿ ಮೌಂಟ್ ಎವೆರೆಸ್ಟನ ಶಿಖರಾರೋಹಣ ಮಾಡುವುದರ ಮೂಲಕ ಇತಿಹಾಸ ನಿರ್ಮಿಸಿದ್ದಾರೆ. ಛತ್ತೀಸ್‌ಗಢದ ಜೈನ ಸಮಾಜದ ಪುತ್ರಿ ಯಾಶಿ ಅವರು ಎವರೆಸ್ಟ್‌ನಲ್ಲಿ ಭಾರತದ ತ್ರಿವರ್ಣ ಧ್ವಜ ಮತ್ತು ಜೈನ ಧ್ವಜವನ್ನು ಭಾರತೀಯ ಕಾಲಮಾನ ಬುಧವಾರ (17 -05 -2023) ಬೆಳಿಗ್ಗೆ 5:45 ಕ್ಕೆ ಹಾರಿಸಿದರು. 

ಮೌಂಟ್ ಎವರೆಸ್ಟ್ ಏರಲು ಹೊರಟಿರುವ 15 ಸದಸ್ಯರ ತಂಡದಲ್ಲಿ ರಾಯಗಢದ ಪರ್ವತಾರೋಹಿ ಯಾಶಿ ಜೈನ್ ಛತ್ತೀಸ್‌ಗಢದ ಏಕೈಕ ಸದಸ್ಯರಾಗಿದ್ದಾರೆ. ಮೌಂಟ್ ಎವರೆಸ್ಟ್ ಶಿಖರಾರೋಹಣ ಅಭಿಯಾನವು ಏಪ್ರಿಲ್ 1 ರಂದು ಪ್ರಾರಂಭವಾಯಿತು ಮತ್ತು ಇದು 45 ದಿನಗಳವರೆಗೆ ನಡೆಯಿತು. ಯಾತ್ರೆಗೆ ತೆರಳುವ ಮುನ್ನ ಪರ್ವತಾರೋಹಿ ಯಾಶಿ ಜೈನ್ ಮುಖ್ಯಮಂತ್ರಿ ಭೂಪೇಶ್ ಬಘೇಲ್ ಅವರನ್ನು ಭೇಟಿ ಮಾಡಿದ್ದರು. ಮೌಂಟ್ ಎವರೆಸ್ಟ್ ಶಿಖರಾರೋಹಣಕ್ಕೆ ಶುಭ ಹಾರೈಕೆಗಳೊಂದಿಗೆ ಸಿಎಂ ಯಾಶಿ ಅವರನ್ನು ಕಳುಹಿಸಿದ್ದರು. ಇದೇ ವೇಳೆ 5 ಲಕ್ಷ ಪ್ರೋತ್ಸಾಹ ಧನ ನೀಡುವುದಾಗಿಯೂ ಕೂಡ ಘೋಷಣೆ ಮಾಡಿದ್ದರು. 

ಯಾಶಿ ಅವರ ತಂದೆ ಅಖಿಲೇಶ್ ಜೈನ್ ರವರು ಪಂಜಾಬ್ ನ್ಯಾಷನಲ್ ಬ್ಯಾಂಕ್‌ನಲ್ಲಿ ಕೆಲಸ ಮಾಡುತ್ತಿದ್ದಾರೆ. ಯಾಶಿ ಜೈನ್ ಛತ್ತೀಸ್‌ಗಢದ ಜೈನ ಸಮುದಾಯದಿಂದ ಮೌಂಟ್ ಎವೆರೆಸ್ಟನ ಶಿಖರಾರೋಹಣ ಮಾಡಿದ ಮೊದಲ ಹುಡುಗಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಯಾಶಿ ಜೈನರವರು ಇಂತಹ ಸಾಧನೆ ಮಾಡಿದ್ದು ಮೊದಲೇನಲ್ಲ. ಬಿ.ಟೆಕ್ ಪದವೀಧರರಾದ ಯಾಶಿಯವರು ಜಗತ್ತಿನ ಹಲವಾರು ಪರ್ವತಗಳ ಶಿಖರಾರೋಹಣ ಮಾಡಿದ್ದಾರೆ. ಇದುವರೆಗೂ ಯಾಶಿಯವರು ಯಶಸ್ವಿಯಾಗಿ ಶಿಖರಾರೋಹಣ ಮಾಡಿದ ಪರ್ತವಾತಗಳ ವಿವರಣೆ ಈ ಕೆಳಗಿನಂತಿದೆ. 

  • 14 ಫೆಬ್ರವರಿ 2023 ರಂದು ದಕ್ಷಿಣ ಅಮೆರಿಕಾದ 6,961 ಮೀಟರ್ ಎತ್ತರದ ಅಕೊನ್ಕಾಗುವಾ ಪರ್ವತ.
  • 2 ಅಕ್ಟೋಬರ್ 2022 ರಂದು 5,896 ಮೀಟರ್‌ ಎತ್ತರವುಳ್ಳ ಆಫ್ರಿಕಾದ ಅತಿ ಎತ್ತರದ ಕಿಲಿಮಂಜಾರೋ ಪರ್ವತ.
  • ಮೇ 2018 ರಲ್ಲಿ ಉತ್ತರಾಖಂಡದ ಮೌಂಟ್ ಜೋಗಿನ ಪರ್ವತ. 
  • ಜುಲೈ 2019 ರಲ್ಲಿ, ಅವರು ಯುರೋಪಿನ ಅತಿ ಎತ್ತರದ ಶಿಖರವಾದ ಮೌಂಟ್ ಎಲ್ಬ್ರಸ್.
  • ಜನವರಿ 2020 ರಲ್ಲಿ, ನೇಪಾಳದ ಮೌಂಟ್ ಐಲ್ಯಾಂಡ್ ಶಿಖರ.

ಯಾಶಿ ಜೈನರವರು ಪರ್ವತಾರೋಹಣದಲ್ಲಿ ಇನ್ನು ಹೆಚ್ಚಿನ ಸಾಧನೆ ಮಾಡಲೆಂದು ಜೈನ ಸಮುದಾಯವು ಶುಭಾಶಯ ಕೋರಿದೆ. 

Search
Recent News
Leave a Comment:

ಕೃತಿಸ್ವಾಮ್ಯ © ಜೈನ ವಾಣಿ 2023