ಸಾಗರದ ಸನ್ಮತಿ ವಿದ್ಯಾರ್ಥಿನಿಲಯಕ್ಕೆ ಜೈನ ವಿದ್ಯಾರ್ಥಿನಿಯರಿಂದ ಅರ್ಜಿ ಆಹ್ವಾನ: ಮೇ 30, 2023 ಕಡೆ ದಿನ
Education JAINISM

Posted by admin on 2023-05-21 21:26:29 |

Share: Facebook | Twitter | Whatsapp | Linkedin


ಸಾಗರದ ಸನ್ಮತಿ ವಿದ್ಯಾರ್ಥಿನಿಲಯಕ್ಕೆ ಜೈನ ವಿದ್ಯಾರ್ಥಿನಿಯರಿಂದ ಅರ್ಜಿ ಆಹ್ವಾನ: ಮೇ 30, 2023 ಕಡೆ ದಿನ

ಸಾಗರ : ತಾಲ್ಲೂಕಿನ ಜೈನ ಸಮುದಾಯದವರ ಬಹುದಿನಗಳ ಬೇಡಿಕೆಯಾಗಿದ್ದ ವಿದ್ಯಾರ್ಥಿನಿಯರ  ವಿದ್ಯಾರ್ಥಿನಿಲಯವನ್ನು ಅತಿಶಯ ಶ್ರೀ ಕ್ಷೇತ್ರ ಹೊಂಬುಜ ಶ್ರೀ ಮಠದ ಪರಮಾಪೂಜ್ಯ ಜಗದ್ಗುರು ಸ್ವಸ್ತಿಶ್ರೀ ಡಾ. ದೇವೇಂದ್ರಕೀರ್ತಿ ಭಟ್ಟಾರಕ ಮಹಾಸ್ವಾಮಿಗಳ ಸಾನಿಧ್ಯದಲ್ಲಿ ಹಾಗೂ ಸಾಗರ ದಿಗಂಬರ ಜೈನ ಸಮಾಜದವರ ಸಮಕ್ಷದಲ್ಲಿ ಸಮಾಲೋಚಿಸಿ ಸಾಗರದ ನೆಹರು ಮೈದಾನದಲ್ಲಿರುವ ನಿವೇಶನದಲ್ಲಿ ಜೈನ ಹೆಣ್ಣು ಮಕ್ಕಳಿಗಾಗಿ 2023-2024 ನೇ ಶೈಕ್ಷಣಿಕ ಸಾಲಿನಿಂದ ವಿದ್ಯಾರ್ಥಿನಿಲಯವನ್ನು ಪ್ರಾರಂಭಿಸಲು ತೀರ್ಮಾನಿಸಲಾಗಿದೆ.

ವಿದ್ಯಾರ್ಥಿನಿಯರ ನಿಲಯದಲ್ಲಿ ಉಚಿತ ವಸತಿ ಹಾಗೂ ಊಟದ ವ್ಯವಸ್ಥೆಯನ್ನು ಕಲ್ಪಿಸಲಾಗುವುದು. ಎಸ್. ಎಸ್. ಎಲ್. ಸಿ. ಮೇಲ್ಪಟ್ಟ ಪ್ರವೇಶ ಬಯಸುವ ವಿದ್ಯಾರ್ಥಿನಿಯರು ಮೇ 30, 2023 ರ ಒಳಗೆ ಅರ್ಜಿ ಸಲ್ಲಿಸಬಹುದು.


  • ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:
    ಶ್ರೀಮಠದ ಕಾರ್ಯಾಲಯ - 08185 262722, 200824
  • ಶ್ರೀಮತಿ ಸುನಂದಾ ಎಂ. ಡಿ. - 94480549871
  • ಶ್ರೀಮತಿ ಶೃತಿ ಏನ್. - 9448468161
  • ಶ್ರೀ ನವೀನ್ ಏನ್. - 8105976456

Search
Recent News
Leave a Comment:

ಕೃತಿಸ್ವಾಮ್ಯ © ಜೈನ ವಾಣಿ 2023