ಕನ್ನಡ ಜೈನ ಕಾವ್ಯಗಳು : ಮರು ಓದು ಮತ್ತು ಅನುಸಂಧಾನ ಎನ್ನುವ ವಿಷಯ ಕುರಿತು ಒಂದು ದಿನದ ರಾಷ್ಟ್ರೀಯ ವಿಚಾರಸಂಕಿರಣ
Education JAINISM

Posted by admin on 2023-05-28 12:25:10 | Last Updated by admin on 2024-04-24 13:39:13

Share: Facebook | Twitter | Whatsapp | Linkedin


ಕನ್ನಡ ಜೈನ ಕಾವ್ಯಗಳು : ಮರು ಓದು ಮತ್ತು ಅನುಸಂಧಾನ ಎನ್ನುವ ವಿಷಯ ಕುರಿತು ಒಂದು ದಿನದ  ರಾಷ್ಟ್ರೀಯ ವಿಚಾರಸಂಕಿರಣ

ವರೂರು : ಎ ಜಿ ಎಂ ಕಲಾ ಹಾಗೂ ವಾಣಿಜ್ಯ ಪದವಿ ಮಹಾವಿದ್ಯಾಲಯ, ವರೂರು  ಹಾಗೂ  ಎಸ್ ಡಿ ಎಂ ಜೈನ ಟ್ರಸ್ಟ್ (ರಿ )  ಹುಬ್ಬಳ್ಳಿ, ಸಹಯೋಗದಲ್ಲಿ ಕನ್ನಡ ಜೈನ ಕಾವ್ಯಗಳು : ಮರು ಓದು ಮತ್ತು ಅನುಸಂಧಾನ ಎನ್ನುವ ವಿಷಯ ಕುರಿತು ಒಂದು ದಿನದ  ರಾಷ್ಟ್ರೀಯ ವಿಚಾರಸಂಕಿರಣವನ್ನು 2023 ರ ಜೂನ್ ತಿಂಗಳಿನ ಕೊನೆಯ ವಾರದಲ್ಲಿ   ಹಮ್ಮಿಕೊಳ್ಳಲಾಗಿದೆ. ಈ ಒಂದು ದಿನದ ರಾಷ್ಟ್ರೀಯ  ವಿಚಾರಸಂಕಿರಣಕ್ಕೆ ಅಧ್ಯಾಪಕರು, ಸಂಶೋಧಕರು ತಮ್ಮ ಸಂಶೋಧನಾ ಲೇಖನಗಳನ್ನು ದಿನಾಂಕ 15-06-2023 ಕಳುಹಿಸಬಹುದಾಗಿದೆ.

ವಿಚಾರ ಸಂಕಿರಣವು ಕೆಳಗಿನ ವಿಷಗಳನ್ನು ಒಳಗೊಂಡಿರಲಿದೆ:

  1. ಜೈನ ಸಾಹಿತ್ಯದಲ್ಲಿ ಲೌಕಿಕ ಮತ್ತು ಅಲೌಕಿಕ ನೆಲೆಗಳ ಸ್ವರೂಪ.
  2. ಜೈನ ಕಾವ್ಯ ತತ್ವಗಳ ಅನುಸಂಧಾನ.
  3. ಜೈನ ಸಾಹಿತ್ಯದಲ್ಲಿ ವೈರಾಗ್ಯದ ಸ್ವರೂಪ ಮತ್ತು ಜೀವನ ಸಂಬಂಧಗಳು.
  4. ಜೈನ ಕಾವ್ಯಗಳಲ್ಲಿ ಮಹಿಳಾ ಪ್ರತಿನಿಧಿಕರಣ.
  5. ಜೈನ ಕಾವ್ಯಗಳ ದೇಸಿಯತೆ.
  6. ಜೈನ ಕಾವ್ಯಗಳಲ್ಲಿ ನಿರೂಪಣೆಗೊಂಡ  ಜನಸಾಮಾನ್ಯರ ಚಿತ್ರಣ.
  7. ಜೈನ ಕಾವ್ಯಗಳಲ್ಲಿ ಭೋಗ- ಯೋಗ ತತ್ವಮೀಮಾಂಸೆ.
  8. ಜೈನ ಕಾವ್ಯಗಳು ಅಭಿವ್ಯಕ್ತಿಸಿದ ಅಹಿಂಸೆಯ ವಿಧಾನ.
  9. ಜೈನ ಕಾವ್ಯಗಳಲ್ಲಿ ಪ್ರಗತಿಪರ ಧೋರಣೆ.
  10. ಜೈನ ಕಾವ್ಯಗಳು ನಿರೂಪಿಸಿದ ಲೋಕನೀತಿ.
  11. ಜೈನ ಸಾಹಿತ್ಯದಲ್ಲಿ ಧರ್ಮ, ಪ್ರಭುತ್ವ ಮತ್ತು ಜನತೆಯ ಸಂಕಥನ.
  12. ಜೈನ ಸಾಹಿತ್ಯದಲ್ಲಿ ಕೌಟುಂಬಿಕ ಚಿತ್ರಣದ ಸ್ವರೂಪ.
  13. ಜೈನ ಸಾಹಿತ್ಯದಲ್ಲಿ ನಿಸರ್ಗ ವರ್ಣನೆಯ ನೆಲೆಗಳು.
  14. ಜೈನ ಸಾಹಿತ್ಯದಲ್ಲಿ ಧರ್ಮ, ಕಾವ್ಯ ಧರ್ಮ,ಸಾಮಾಜಿಕ ಧರ್ಮದ ನೆಲೆಗಳು.
  15. ಜೈನ ಸಾಹಿತ್ಯದಲ್ಲಿ ಕಥನ ಪರಂಪರೆಯ ಆಯಾಮಗಳು.
  16. ಜೈನ ಕಾವ್ಯದಲ್ಲಿ ಶೃಂಗಾರದ ನಿರಾಕರಣೆ.
  17. ಜೈನ ಸಾಹಿತ್ಯದಲ್ಲಿ ಲಿಂಗ ತಾರತಮ್ಯದ ನಿರಾಕರಣೆಯ ಸಂದರ್ಭಗಳು.
  18. ಜೈನ ಕಾವ್ಯಗಳ ಜೀವನ ದೃಷ್ಟಿ.
  19. ಜೈನ ಕಾವ್ಯಗಳಲ್ಲಿ ಉಲ್ಲೇಖಗೊಂಡ ವ್ಯಕ್ತಿನಾಮ ,ಸ್ಥಳ ನಾಮಗಳು.
  20. ಜೈನ ಕಾವ್ಯಗಳ ಶೈಲಿ ಮತ್ತು ಭಾಷೆಯ ಸ್ವರೂಪ.
  21. ಜೈನ ಕಾವ್ಯಗಳಲ್ಲಿ ಪಶು- ಪಕ್ಷಿ ಲೋಕದ ಕಥನ.
  22. ಜೈನ ಸಾಹಿತ್ಯದಲ್ಲಿ ಭಕ್ತಿ ಮತ್ತು ವೈರಾಗ್ಯದ ನೆಲೆಗಳು.
  23. ಜೈನ ಕವಿಗಳು ಕಂಡ ಯುದ್ಧಗಳ ಸ್ವರೂಪ.
  24. ಜೈನ ಸಾಹಿತ್ಯದಲ್ಲಿ ಮಹಿಳಾ ಲೋಕದ ವೈರುಧ್ಯಗಳು.
  25. ಜೈನ ಕಾವ್ಯಗಳು ನಿರೂಪಿಸಿದ ಚಳುವಳಿ.
  26. ಜೈನ ಸಾಹಿತ್ಯದಲ್ಲಿ ಸಂಸ್ಕೃತಿ ಮತ್ತು ಯಜಮಾನಿಕೆಯ ಪ್ರಶ್ನೆಗಳು.
  27. ಜೈನ ಸಾಹಿತ್ಯದಲ್ಲಿ ಕಥನ ಪರಂಪರೆಯ ಆಯಾಮಗಳು.
  28. ಜೈನ ಕಾವ್ಯೋಕ್ತ ಕನ್ನಡ ಸಮಾಜ.
  29. ಜೈನ ಕಾವ್ಯಗಳು ನಿರೂಪಿಸಿದ ಪ್ರೇಮ, ವಿರಹಗಳ ಭಿನ್ನ ನೆಲೆಗಳು.
  30. ಜೈನ ಕಾವ್ಯಗಳಲ್ಲಿ ಅಣು ವ್ರತಗಳು.
  31. ಜೈನ ಕಾವ್ಯಗಳಲ್ಲಿ ಯತಿಗಳ ತಪಸ್ಸು ಮತ್ತು ಮಹಿಮೆಗಳ ಸ್ವರೂಪ.
  32. ಜೈನ ಕಾವ್ಯಗಳ ಜನಮುಖಿ  ಧೋರಣೆಗಳು.
  33. ಜೈನ ಕಾವ್ಯಗಳಲ್ಲಿ ಅಭಿವ್ಯಕ್ತಿಯಾದ ಮೋಕ್ಷದ ಸ್ವರೂಪ.
  34. ಜೈನ ಕವಿಗಳು ಕಂಡ ಕನ್ನಡ ಭಾಷಾ ವೈವಿಧ್ಯತೆ ಮತ್ತು ಕರ್ನಾಟಕದ  ಭೂಗೋಳ.
  35. ಜೈನ ಕವಿಗಳು ನಿರ್ವಹಿಸಿದ ನವರಸಗಳ ವಿಭಿನ್ನ ಸ್ವರೂಪ.
  36. ಜೈನ ಸಾಹಿತ್ಯದಲ್ಲಿ ಕುಟುಂಬ ವ್ಯವಸ್ಥೆಯ ಚಿತ್ರಣಗಳು.
  37. ಜೈನ ಸಾಹಿತ್ಯದಲ್ಲಿ  ಸಂಪತ್ತು ಮತ್ತು ವೈರಾಗ್ಯದ ವೈರುಧ್ಯಗಳು.
  38. ಕಾವ್ಯೋಕ್ತ ಜೈನ ಕೇಂದ್ರಗಳು ಹಾಗೂ ದೈವಗಳ ಚಿತ್ರಣ.
  39. ಜೈನ ಕಾವ್ಯೋಕ್ತ ವ್ರತ -ನಿಯಮ- ಪವಾಡಗಳ ನೈಜ ಲೋಕದ ಚಿತ್ರಣ.
  40. ಜೈನ ಸಾಹಿತ್ಯದಲ್ಲಿ ಹಿಂಸೆ -ಅಹಿಂಸೆಗಳ ವಿವರ ಮತ್ತು ವೈರುಧ್ಯಗಳು.
  41. ಜೈನ ಕಾವ್ಯಗಳ ರಾಜಕೀಯ ಧೋರಣೆಗಳು ಹಾಗೂ ಅಧಿಕಾರದ ಸಂಬಂಧಗಳು.
  42. ಜೈನ ಸಾಹಿತ್ಯದಲ್ಲಿ ಆತ್ಮ ಮತ್ತು ಬ್ರಹ್ಮವಾದಗಳ ನಿರಾಕರಣೆಯ ಸಂದರ್ಭಗಳು.
  43. ಜೈನ ಕಾವ್ಯಮೀಮಾಂಸೆಯಲ್ಲಿ ಅನೇಕಾಂತವಾದ.
  44. ಜೈನ  ಕಾವ್ಯೋಕ್ತವಾದ  ಯುದ್ಧದ ಪರಿಕರಗಳು.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:

ಪ್ರಾಚಾರ್ಯರು 
ಪ್ರೊ. ಸುಮಾ ವಸಂತ ಸಾವಂತ
7892986533

ಕನ್ನಡ ವಿಭಾಗ
ಶ್ರೀಮತಿ.ಪ್ರಭಾವತಿ ಕೋಕಾಟಿ
7795462632

Search
Recent News
Leave a Comment:

ಕೃತಿಸ್ವಾಮ್ಯ © ಜೈನ ವಾಣಿ 2024