ಪ್ರತಿಭಾವಂತ 10 ನೇ ತರಗತಿ SSLC ಪಾಸಾದ ಜೈನ ವಿದ್ಯಾರ್ಥಿಗಳಿಗಾಗಿ ಜೀತೋ ಶ್ಯಾಂಕಿ ಬೆಳಗಾವಿ ವಿಭಾಗದಿಂದ ವಿದ್ಯಾರ್ಥಿ ವೇತನ ಯೋಜನೆ
Education JAINISM

Posted by admin on 2023-06-02 22:59:03 |

Share: Facebook | Twitter | Whatsapp | Linkedin


ಪ್ರತಿಭಾವಂತ 10 ನೇ ತರಗತಿ SSLC  ಪಾಸಾದ ಜೈನ ವಿದ್ಯಾರ್ಥಿಗಳಿಗಾಗಿ ಜೀತೋ ಶ್ಯಾಂಕಿ ಬೆಳಗಾವಿ ವಿಭಾಗದಿಂದ ವಿದ್ಯಾರ್ಥಿ ವೇತನ ಯೋಜನೆ

ಬೆಳಗಾವಿ : ಜೀತೊ ಬೆಳಗಾವಿ ವಿಭಾಗವು ಪ್ರತಿಭಾವಂತ 10 ನೇ ತರಗತಿ SSLC  ಪಾಸಾದ ಜೈನ ವಿದ್ಯಾರ್ಥಿಗಳಿಗಾಗಿ ವಿದ್ಯಾರ್ಥಿ ವೇತನ ಯೋಜನೆ - ೨೦೨೩ ಸಲುವಾಗಿ ಅರ್ಜಿ ಆಹ್ವಾನಿಸಿದೆ. "ಜೀತೋ ಶ್ಯಾಂಕಿ ವಿದ್ಯಾರ್ಥಿವೇತನ" ವು ಜೀತೋ ಬೆಳಗಾವಿ ವಿಭಾಗದ ವಾರ್ಷಿಕ ಯೋಜನೆಯಾಗಿದ್ದು ಮೇ 2023 ನೇ ಸಾಲಿನಲ್ಲಿ  10 ನೇ  ತರಗತಿ S.S.L.C. ಯಲ್ಲಿ ಪಾಸಾದ, ಬೆಳಗಾವಿ ಜಿಲ್ಲೆಯಲ್ಲಿನ  ಆರ್ಥಿಕವಾಗಿ ಹಿಂದುಳಿದ ಜೈನ ವಿದ್ಯಾರ್ಥಿಗಳಿಗಾಗಿ ಆರ್ಥಿಕ ಸಹಾಯವನ್ನು ಮಾಡುತ್ತದೆ. ಈ ಯೋಜನೆಯ ಲಾಭವನ್ನು ಪಡೆಯಲು ಅರ್ಹ ಅಭ್ಯರ್ಥಿಗಳು ಕೆಳಗಿನ ಲಿಂಕ ಮೂಲಕ ಅರ್ಜಿ ಸಲ್ಲಿಸಬಹುದು. 

https://forms.gle/H86XgdJYuVriZp29A

ಅರ್ಜಿ ಭರ್ತಿ ಮಾಡಿ ಕಳುಹಿಸುವ  ಕೊನೆಯ ದಿನಾಂಕ ಜೂನ್ 5, 2023 ಆಗಿರುತ್ತದೆ.

ನಿಬಂಧನೆಗಳು & ನಿಯಮಗಳು

  1. ಅರ್ಜಿ ಸಲ್ಲಿಸುವ ವಿದ್ಯಾರ್ಥಿಯು 2023 ನೇ ಸಾಲಿನಲ್ಲಿ 10 ನೇ ತರಗತಿ SSLC ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು.
  2. ಫಲಾನುಭವಿಗಳ ಆಯ್ಕೆ ಪ್ರಕ್ರಿಯೆ ಜೀತೋ ಬೆಳಗಾವಿ ಸಂಸ್ಥೆಯ  ನಿಯಮಾನುಸಾರ ಮಾಡಲಾಗುವುದು.
  3. ತಿರಸ್ಕ್ರತಗೊಂಡ ಅರ್ಜಿಗಳ ಬಗ್ಗೆ ಯಾವುದೇ ಕಾರಣಗಳನ್ನು ತಿಳಿಸಲಾಗುವುದಿಲ್ಲ.
  4. ಆರ್ಥಿಕವಾಗಿ ಹಿಂದುಳಿದ ‌ಕುಟುಂಬಗಳಿಂದ ಬಂದಂತ ವಿದ್ಯಾರ್ಥಿಗಳು ಮಾತ್ರ ಅರ್ಜಿ ಸಲ್ಲಿಸಬೇಕು.
  5. ಅರ್ಜಿ ಸ್ವೀಕರಿಸುವ ಅವಧಿಯನ್ನು  ಕಡಿತಗೊಳಿಸುವ ಅಧಿಕಾರವನ್ನು ಜೀತೋ ಬೆಳಗಾವಿ  ಸಂಸ್ಥೆ ಕಾಯ್ದಿರಿಸಿದೆ.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ 

  • 9845016717
  • 9035187432

(ಬೆಳಿಗ್ಗೆ 9 ಗಂಟೆಯಿಂದ ಸಾಯಂಕಾಲ 6 ಗಂಟೆಯವರೆಗೆ)

Search
Recent News
Leave a Comment:

ಕೃತಿಸ್ವಾಮ್ಯ © ಜೈನ ವಾಣಿ 2023