ಜೂನ್ 1, 2023: ನಮೋಕಾರ ಮಹಾಮಂತ್ರ ಕೇಳುತ್ತಲೇ 89 ವರ್ಷದ ಆಚಾರ್ಯ ಶ್ರೀ ವೀಪುಲ ಸಾಗರ ಮಹಾರಾಜರ ಸಲ್ಲೇಖನ ಸಮಾಧಿ ಮರಣವು ಸಮಾಪ್ತ
Culture JAINISM

Posted by admin on 2023-06-02 23:26:19 |

Share: Facebook | Twitter | Whatsapp | Linkedin


ಜೂನ್ 1, 2023: ನಮೋಕಾರ ಮಹಾಮಂತ್ರ ಕೇಳುತ್ತಲೇ 89 ವರ್ಷದ ಆಚಾರ್ಯ ಶ್ರೀ ವೀಪುಲ ಸಾಗರ ಮಹಾರಾಜರ ಸಲ್ಲೇಖನ ಸಮಾಧಿ ಮರಣವು ಸಮಾಪ್ತ

ಜೈಪುರ : ದಿನಾಂಕ 1 ಜೂನ್ 2023 ರ ಮಧ್ಯಾಹ್ನ 11:03 ಕ್ಕೆ ನಮೋಕಾರ ಮಹಾಮಂತ್ರ ಕೇಳುತ್ತಲೇ 89 ವರ್ಷದ ಆಚಾರ್ಯ ಶ್ರೀ ವೀಪುಲ ಸಾಗರ ಮಹಾರಾಜರ ಸಲ್ಲೇಖನ ಸಮಾಧಿ ಮರಣವು ಸಮಾಪ್ತವಾಯಿತು. ಸಮಾಧಿ ಮರಣದ ಸಮಯದಲ್ಲಿ ಆಚಾರ್ಯ ವೀಪುಲ ಸಾಗರ ಮಹಾರಾಜರ ಶಿಷ್ಯರಾದ ಆಚಾರ್ಯ ಶ್ರೀ ಭದ್ರ ಭಾವು  ಮಹಾರಾಜರು, ಆರ್ಯಿಕ ಶಿರೋಮಣಿ ಶ್ರೀ ಜ್ಞಾನಮತಿ ಮಾತಾಜಿ, ಶ್ರೀ ಚಂದನಮತಿ ಮಾತಾಜಿ ಹಾಗೂ ಶ್ರೀ ರವೀಂದ್ರ ಕೀರ್ತಿ ಮಹಾರಾಜರು ಉಪಸ್ಥಿತರಿದ್ದರು. ಮಹಾ ಮುನಿಗಳ ಅಂತ್ಯಕ್ರಿಯೆಯನ್ನು ದಿನಾಂಕ್ 1 ಜೂನ್, 2023 ರ ಸಂಜೆ 4:00 ಘಂಟೆಗೆ ಅಯೋಧ್ಯಾ ತೀರ್ಥ ಕ್ಷೇತ್ರದಲ್ಲಿ ನಡೆಸಿಲಾಯಿತು.

ವೀಪುಲ ಸಾಗರ ಮಹಾರಾಜರ ಸಂಕ್ಷಿಪ್ತ ಪರಿಚಯ

  • ಜನ್ಮ ಹೆಸರು : ಶ್ರೀ ವೀರಚಂದ್ರ ಪಾಟನಿ
  • ಜನ್ಮ ಸ್ಥಳ : ಪಲಾರಿ, ಟೊಂಕ್ ಜಿಲ್ಲೆ ರಾಜಸ್ತಾನ
  • ಜನ್ಮ ದಿನಾಂಕ 16 ಏಪ್ರಿಲ್ 1934
  • ತಂದೆ : ಶ್ರೀ ಬಜರಂಗಲಾಲ ಪಾಟನಿ
  • ತಾಯಿ : ಶ್ರೀಮತಿ ಕಸ್ತೂರಿಬಾಯಿ ಪಾಟನಿ 
  • ಮುನಿ ದೀಕ್ಷೆ : ವಸಂತ ಪಂಚಮಿ, 1976 ಮುಜಪ್ಪರ ನಗರ ಉತ್ತರ ಪ್ರದೇಶ

Search
Recent News
Leave a Comment:

ಕೃತಿಸ್ವಾಮ್ಯ © ಜೈನ ವಾಣಿ 2023