ಮುರಗುಂಡಿಯ ೧೦೦೮ ಶ್ರೀ ಪಾರ್ಶ್ವನಾಥ ದಿಗಂಬರ ಜೈನ ಮಂದಿರದಲ್ಲಿ ದೀಕ್ಷಾ ಮಹೋತ್ಸವ
Culture JAINISM

Posted by admin on 2023-06-19 11:34:35 |

Share: Facebook | Twitter | Whatsapp | Linkedin


ಮುರಗುಂಡಿಯ ೧೦೦೮ ಶ್ರೀ ಪಾರ್ಶ್ವನಾಥ ದಿಗಂಬರ ಜೈನ ಮಂದಿರದಲ್ಲಿ ದೀಕ್ಷಾ ಮಹೋತ್ಸವ

ಅಥಣಿ : ದಿನಾಂಕ 13-6-2023 ರಂದು ತಾಲೂಕಿನ ಮುರಗುಂಡಿಯ ಶ್ರೀ ಪಾರ್ಶ್ವನಾಥ ದಿಗಂಬರ ಜೈನ ಮಂದಿರದಲ್ಲಿಆಚಾರ್ಯ ಶ್ರೀ 108 ಅಮಿತಸೇನ ಮುನಿ ಮಹಾರಾಜರ ಪರಮ ಸಾನಿಧ್ಯದಲ್ಲಿ ದೀಕ್ಷಾ ಮಹೋತ್ಸವ ಕಾರ್ಯಕ್ರಮವು ನೆರವೇರಿತು. ಮೊದಲನೆಯದಾಗಿ ಆಚಾರ್ಯ ಶ್ರೀ 108 ದೇವಸೇನ ಮುನಿ ಮಹಾರಾಜರ ಪರಮ ಶಿಷ್ಯರಾದ ಕ್ಷುಲ್ಲಕ ಮಲ್ಲಿಸೇನರು ದಿಗಂಬರತ್ವ ಸ್ವೀಕರಿಸಿ ೧೦೦೮ ಶ್ರೀ ಮಲ್ಲಿಸೇನ ಮಹಾರಾಜರಾದರು.

ಅನಂತರ ಆಚಾರ್ಯ ಶ್ರೀ 108 ಸುಲಬಸಾಗರ ಮುನಿಗಳ ಶಿಷ್ಯರಾದ ಕ್ಷುಲ್ಲಕ ಭದ್ರಸೇನರು ದೀಕ್ಷೆ ಸ್ವೀಕರಿಸಿ ಐಲಕ ಶ್ರೀ ಭದ್ರಸೇನರಾದರು. ಈ ಕಾರ್ಯಕ್ರಮದಲ್ಲಿ ಅಥಣಿ ತಾಲೂಕಿನ ಸಮಸ್ತ ಜೈನ ಸಮಾಜದ ಶ್ರಾವಕ ಶ್ರಾವಕಿಯರು ಉಪಸ್ಥಿತರಿದ್ದರು. 

ಮಾಹಿತಿ: ಶ್ರೀ ಲಕ್ಷ್ಮಣ ಸಪ್ತಸಾಗರ, ಹಳ್ಳೂರು

Search
Recent News
Leave a Comment:

ಕೃತಿಸ್ವಾಮ್ಯ © ಜೈನ ವಾಣಿ 2023