Posted by Avinash PB on 2023-06-22 11:59:15 |
Share: Facebook | Twitter | Whatsapp | Linkedin
ಇಂದೋರ್: ಶಿಮ್ಲಾದ ಶತಮಾನದಷ್ಟು ಹಳೆಯದಾದ ಜೈನ ಮಂದಿರದಲ್ಲಿ ಭಕ್ತರು ಚಿಕ್ಕ ಅಥವಾ ಅಶ್ಲೀಲ ಬಟ್ಟೆಗಳನ್ನು ಧರಿಸುವುದನ್ನು ನಿಷೇಧಿಸಿದ ಕೆಲವು ದಿನಗಳ ನಂತರ ಭೋಪಾಲ್‌ನಲ್ಲಿಯೂ ಇದೇ ರೀತಿಯ ಘಟನೆ ವರದಿಯಾಗಿದೆ. ಭೋಪಾಲ, ಇಂದೋರ್ ನಗರಗಳನ್ನು ಒಳಗೊಂಡಂತೆ ಮಧ್ಯ ಪ್ರದೇಶದ ಎಲ್ಲ ಜೈನ ಮಂದಿರಗಳಲ್ಲಿ ಜೀನ್ಸ್, ಹಾಫ್ ಪ್ಯಾಂಟ್, ಮಿನಿ ಸ್ಕರ್ಟ್ ನಿಷೇಧ ಮಾಡುವ ಪ್ರಕ್ರಿಯೆವು ಶುರುವಾಗಿದೆ.
ಮಧ್ಯಪ್ರದೇಶದ ರಾಜಧಾನಿ ಭೋಪಾಲನ ಚಂದ್ರಪ್ರಭು ದಿಗಂಬರ ಜೈನ ಮಂದಿರ ಮಂಗಲವಾರಾ ಟ್ರಸ್ಟ್, ಮಂದಿರಗಳಲ್ಲಿ ಸೂಕ್ತ ಉಡುಪುಗಳನ್ನು ಧರಿಸದ ಭಕ್ತರ ಪ್ರವೇಶವನ್ನು ನಿಷೇಧಿಸಿದೆ ಮತ್ತು ಜನರು "ಸಭ್ಯ ಉಡುಪುಗಳನ್ನು" ಧರಿಸಿ ದೇವಾಲಯಗಳಿಗೆ ಭೇಟಿ ನೀಡುವಂತೆ ಮನವಿ ಮಾಡಿದೆ.
ಇಂದೋರಿನ ಜೈನ ಸಮಾಜ ಫೆಡೆರೇಶನ ಮೀಡಿಯಾ ಪ್ರಭಾರಿಯಾದ ಶ್ರೀ ರಾಜೇಶ್ ಜೈನರವರು ಚಂದ್ರಪ್ರಭು ದಿಗಂಬರ ಜೈನ ಮಂದಿರ ಮಂಗಲವಾರಾ ಟ್ರಸ್ಟ್ ನ ನಡೆಯನ್ನು ಸ್ವಾಗತಿಸಿದರು ಮತ್ತು ಮುಂದಿನ ದಿನಗಳಲ್ಲಿ ಎಲ್ಲ ಜೈನ ಮಂದಿರಗಲ್ಲಿ ಈ ರೀತಿಯ ನಿಯಮಾವಳಿಗಳನ್ನು ಜಾರಿಗೆ ತರಲು ಪ್ರಯತ್ನಿಸಬೇಕೆಂದು ಹೇಳಿದರು.
ಆದೇಶದಲ್ಲಿ ಏನಿದೆ ?
"ಇದು ಧಾರ್ಮಿಕ ಸ್ಥಳವಾಗಿದೆ, ಪ್ರವಾಸಿ ಸ್ಥಳವಲ್ಲ, ದಯವಿಟ್ಟು ಯೋಗ್ಯವಾದ ಬಟ್ಟೆಗಳನ್ನು ಧರಿಸಿ ದೇವಾಲಯದ ಆವರಣಕ್ಕೆ ಪ್ರವೇಶಿಸಿ. ರಾತ್ರಿ ಉಡುಪುಗಳು, ಸಣ್ಣ ಬಟ್ಟೆ, ಹಾಫ್ ಪ್ಯಾಂಟ್, ಮಿನಿ ಸ್ಕರ್ಟ್‌ಗಳನ್ನು ಧರಿಸಿದರೆ ಪ್ರವೇಶವನ್ನು ನಿಷೇಧಿಸಲಾಗಿದೆ".