ಜೈನ ಮುನಿ ಆಚಾರ್ಯ ಶ್ರೀ ಕಾಮಕುಮಾರ ನಂದಿ ಮಹಾರಾಜರ ತುಂಡಾದ ಶವವನ್ನು ಕೊಳವೆ ಭಾವಿಯಿಂದ ಹೊರ ತೆಗೆದ ಪೊಲೀಸರು
General JAINISM

Posted by Avinash PB on 2023-07-08 16:02:28 |

Share: Facebook | Twitter | Whatsapp | Linkedin


ಜೈನ ಮುನಿ ಆಚಾರ್ಯ ಶ್ರೀ ಕಾಮಕುಮಾರ ನಂದಿ ಮಹಾರಾಜರ ತುಂಡಾದ ಶವವನ್ನು ಕೊಳವೆ ಭಾವಿಯಿಂದ ಹೊರ ತೆಗೆದ ಪೊಲೀಸರು

ಕಟಕಬಾವಿ: ಹತ್ಯೆಗೋಳಗಾಗಿದ್ದ ಜೈನ ಮುನಿ ಆಚಾರ್ಯ ಶ್ರೀ 108 ಕಾಮಕುಮಾರ ನಂದಿ ಮಹಾರಾಜರ ತುಂಡಾದ ಶವವನ್ನು ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಕಟಕಬಾವಿಯ 400 ಅಡಿ ಆಳದ ಕೊಳವೆ ಭಾವಿಯಿಂದ ಹೊರತೆಗಯಲಾಗಿದೆ. ಪ್ರಾಥಮಿಕ ಮಾಹಿತಿಯ ಪ್ರಕಾರ ಮುನಿಗಳಿಗೆ ವಿದ್ಯುತ್ ಶಾಕ್ ನೀಡಿ ಚಿತ್ರಹಿಂಸೆ ನೀಡಿ, ತದನಂತರ ಕೈ ಕಾಲುಗಳನ್ನು ಕತ್ತರಿಸಿ ಹತ್ಯೆ ಮಾಡಿ ಕೊಳವೆ ಭಾವಿಗೆ ಎಸೆಯಲಾಗಿದೆ.

ಕೊಟ್ಟ ಹಣ ವಾಪಸ ಕೇಳಿದ್ದಕ್ಕೆ ತಮ್ಮ ಆಪ್ತನಿಂದಲೇ ಮುನಿಗಳು ಹತ್ಯೆಗೋಳಗಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಹತ್ಯೆ ಮಾಡಿದ ಆರೋಪಿಗಳನ್ನು ನಾರಾಯಣ ಮೌಲಿ ಮತ್ತು ಹಸನ ದಲಾಯತ ಎಂದು ಗುರುತಿಸಲಾಗಿದ್ದು, ಇಬ್ಬರು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದು ವಿಚಾರಣೆ ಮುಂದುವರೆಸಿದ್ದಾರೆ.

Search
Recent News
Leave a Comment:
Sunil Kottur
at 2023-07-09 07:01:48
CBI kodabeku

ಕೃತಿಸ್ವಾಮ್ಯ © ಜೈನ ವಾಣಿ 2023