ಖಂಡಗ್ರಾಸ ಚಂದ್ರಗ್ರಹಣದ ವಿವರ ಮತ್ತು ರಾಶಿಗಳ ಮೇಲೆ ಚಂದ್ರಗ್ರಹಣದ ಪರಿಣಾಮ
Horoscope JAINISM

Posted by admin on 2023-10-27 13:11:30 |

Share: Facebook | Twitter | Whatsapp | Linkedin


ಖಂಡಗ್ರಾಸ ಚಂದ್ರಗ್ರಹಣದ ವಿವರ ಮತ್ತು ರಾಶಿಗಳ ಮೇಲೆ ಚಂದ್ರಗ್ರಹಣದ ಪರಿಣಾಮ

ವಿಜ್ಞಾನ ಸಚಿವಾಲಯದ ಅಧಿಕೃತ ಪ್ರಕಟಣೆಯ ಪ್ರಕಾರ, ಅಕ್ಟೋಬರ್ 28, 2023 ಮತ್ತು ಅಕ್ಟೋಬರ್ 29, 2023 ರಂದು (6-7 ಕಾರ್ತಿಕ, 1945 ಶಕ ಯುಗ), ಭಾಗಶಃ ಚಂದ್ರಗ್ರಹಣ ಇರುತ್ತದೆ. ಅಕ್ಟೋಬರ್ 28, 2023 ರಂದು ಮಧ್ಯರಾತ್ರಿಯ ೧೧:೩೨ ಸುಮಾರಿಗೆ ಚಂದ್ರಗ್ರಹಣವು ಪ್ರಾಂಭವಾಗಿ, ಅಕ್ಟೋಬರ್ 29 ರ ನಸುಕಿನ ೩:೨೬ ಕ್ಕೆ ಮುಕ್ತಾಯವಾಗಲಿದೆ.

ಮೇಷ: ಈ ರಾಶಿಯವರಿಗೆ ಚಂದ್ರಗ್ರಹಣವು ಮಾನಸಿಕ ಸಮಸ್ಯೆಗಳನ್ನು ಹೆಚ್ಚು ಮಾಡುವ ಸಾಧ್ಯತೆ ಇದೆ. ಇದರ ಜೊತೆಗೆ ಅಪಘಾತ ಹಾಗೂ ಗಾಯಗಳು ಸಹ ಉಂಟಾಗುವ ಸಾಧ್ಯತೆ ಬಹಳಷ್ಟಿದೆ.

ವೃಷಭ: ಗ್ರಹಣದ ಪರಿಣಾಮ ಕುಟುಂಬದಲ್ಲಿ ಸಮಸ್ಯೆಗಳನ್ನ ಉಂಟು ಸೃಷ್ಟಿ ಮಾಡುತ್ತದೆ. ಮುಖ್ಯವಾಗಿ ಈ ಸಮಯದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಬಹುದು. ಇದರ ಜೊತೆಗೆ ಆರ್ಥಿಕ ಸಮಸ್ಯೆಗಳನ್ನ ಸಹ ಅನುಭವಿಸಬೇಕಾಗುತ್ತದೆ.

ಮಿಥುನ: ಚಂದ್ರಗ್ರಹಣದ ಪ್ರಭಾವದಿಂದಾಗಿ ಈ ರಾಶಿಯವರಿಗೆ ಲಾಭವಾಗುತ್ತದೆ. ಈ ಸಮಯದಲ್ಲಿ ಸಂಪತ್ತು ನಿಮ್ಮನ್ನೇ ಹುಡುಕಿ ಬರುವ ಅನೇಕ ಸಾಧ್ಯತೆ ಇದೆ. ಇದರ ಜೊತೆಗೆ ಸಂತೋಷದ ಸುದ್ದಿ ಸಿಗಲಿದೆ.

ಕಟಕ: ರಾಶಿಯವರ ಜೀವನದಲ್ಲಿ ಗ್ರಹಣದ ಕಾರಣದಿಂದ ಜಗಳ ಆಗುತ್ತದೆ. ವಾದಗಳು ಸಹ ಉಂಟಾಗುತ್ತದೆ. ನೀವು ಮಾತಿನ ಮೇಲೆ ನಿಗಾ ಇಟ್ಟುಕೊಳ್ಳುವುದು ಬಹಳ ಅಗತ್ಯ. ನಿಮ್ಮ ಕೋಪವನ್ನು ಸಹ ನಿಯಂತ್ರಿಸಿ.

ಸಿಂಹ: ಈ ರಾಶಿಯವರಿಗೆ ಮಕ್ಕಳ ಕಡೆಯಿಂದ ಸಮಸ್ಯೆಗಳಾಗುತ್ತದೆ. ಸಣ್ಣ ತೊಂದರೆ ದೊಡ್ದದಾಗುವ ಸಾಧ್ಯತೆ ಇದೆ. ಇದರ ಜೊತೆಗೆ ಸ್ವಲ್ಪ ಮಾನಸಿಕವಾಗಿ ಕಷ್ಟವನ್ನ ಅನುಭವಿಸಬೇಕಾಗುತ್ತದೆ.

ಕನ್ಯಾ: ಈ ಗ್ರಹಣ ಅನೇಕ ರೀತಿಯ ಸಂತೋಷವನ್ನು ತರುತ್ತದೆ ನಿಮ್ಮ ಜೀವನದಲ್ಲಿ ಎನ್ನಬಹುದು. ಈ ಸಮಯದಲ್ಲಿ ನೀವು ವಾಹನ ಮತ್ತು ಆಸ್ತಿಯನ್ನು ಖರೀದಿಸುವ ಸಾಧ್ಯತೆ ಸಹ ಇದ್ದು, ಒಳ್ಳೆಯದಾಗುತ್ತದೆ.

ತುಲಾ: ತುಲಾ ರಾಶಿಯಲ್ಲಿ ಚಂದ್ರಗ್ರಹಣದ ಪ್ರಭಾವದಿಂದ ಸಂಗಾತಿಯೊಂದಿಗೆ ಭಿನ್ನಾಭಿಪ್ರಾಯ ಉಂಟಾಗಬಹುದು. ಕೆಲಸದ ಜೀವನದಲ್ಲಿ ಒತ್ತಡ ಹೆಚ್ಚಾಗುವ ಸಾಧ್ಯತೆ ಇದೆ. ಸ್ವಲ್ಪ ತಾಳ್ಮೆ ಇರಲಿ.

ವೃಶ್ಚಿಕ: ಈ ರಾಶಿಯವರಿಗೆ ಚಂದ್ರ ಗ್ರಹಣದಿಂದ ಆರೋಗ್ಯ ಸಮಸ್ಯೆಗಳಾಗುತ್ತದೆ. ಇದರಿಂದ ನಿಮಗೆ ಸ್ವಲ್ಪ ವೆಚ್ಚಗಳು ಸಹ ಹೆಚ್ಚಾಗುತ್ತದೆ. ಹಾಗಾಗಿ ಈ ಸಮಯದಲ್ಲಿ ಆರೋಗ್ಯದ ಬಗ್ಗೆ ಎಚ್ಚರಿಕೆ ವಹಿಸಬೇಕು.

ಧನಸ್ಸು: ಈ ಗ್ರಹಣದ ಸಮಯದಲ್ಲಿ ನೀವು ಅವಮಾನಗಳನ್ನು ಎದುರಿಸಬಹುದು. ಯಾರೊಂದಿಗಾದರೂ ಜಗಳ ಆಡುವ ಸಾಧ್ಯತೆ ಇರುತ್ತದೆ. ನೀವು ಯಾರನ್ನೂ ನಂಬಲೂ ಹೋಗಬೇಡಿ.

ಮಕರ: ಗ್ರಹಣದ ಸಮಯದಲ್ಲಿ ಮಕರ ರಾಶಿಯವರು ಭೌತಿಕ ಸುಖಗಳನ್ನು ಪಡೆಯುವ ಸಾಧ್ಯತೆಯಿದೆ. ನೀವು ವಾಹನ ಮತ್ತು ಆಸ್ತಿಯನ್ನು ಸಹ ಯಾವುದೇ ಅಡೆ-ತಡೆ ಇಲ್ಲದೇ ಖರೀದಿ ಮಾಡುವ ಸಾಧ್ಯತೆ ಇದೆ.

ಕುಂಭ: ಈ ರಾಶಿಯವರಿಗೆ ವ್ಯವಹಾರದಲ್ಲಿ ಲಾಭವನ್ನು ಪಡೆಯಲು ಅವಕಾಶ ಸಿಗುತ್ತದೆ. ಅಲ್ಲದೇ, ಬರಬೇಕಿದ್ದ ಬಾಕಿ ಹಣ ಸಹ ಈ ಸಮಯದಲ್ಲಿ ಕೈ ಸೇರಲಿದೆ. ಸಾಲದ ಸಮಸ್ಯೆಯಿಂದ ಸಹ ಮುಕ್ತಿ ಸಿಗುತ್ತದೆ.

ಮೀನ: ಈ ಗ್ರಹಣದ ಪರಿಣಾಮ ನಿಮ್ಮ ವ್ಯವಹಾರದ ಮೇಲೆ ಆಗುತ್ತದೆ. ಸ್ವಲ್ಪ ಹಣಕಾಸಿನ ನಷ್ಟ ಉಂಟಾಗುವ ಸಾಧ್ಯತೆ ಇದೆ. ನೀವು ಈ ಸಮಯದಲ್ಲಿ ಯಾವುದೇ ಹೂಡಿಕೆ ಮಾಡದಿರುವುದು ಬಹಳ ಉತ್ತಮ.

[Source : News 18 Kannada]

Search
Recent News
Leave a Comment:

ಕೃತಿಸ್ವಾಮ್ಯ © ಜೈನ ವಾಣಿ 2023