19 ವರ್ಷಗಳ ನಂತರ ಮತ್ತೆ ಅಧಿಕ ಮಾಸದಿಂದಾಗಿ ಈ ವರ್ಷ 149 ದಿನಗಳ ಕಾಲ ಚಾತುರ್ಮಾಸ ಆಚರಣೆ
Culture JAINISM

Posted by admin on 2023-06-21 09:37:25 |

Share: Facebook | Twitter | Whatsapp | Linkedin


19 ವರ್ಷಗಳ ನಂತರ ಮತ್ತೆ ಅಧಿಕ ಮಾಸದಿಂದಾಗಿ ಈ ವರ್ಷ 149 ದಿನಗಳ ಕಾಲ ಚಾತುರ್ಮಾಸ ಆಚರಣೆ

2023 ರ ವರ್ಷವು ಜೈನ ಧರ್ಮದ ಅನುಯಾಯಿಗಳಿಗೆ ವಿಶೇಷವಾಗಿರಲಿದೆ. ಈ ವರ್ಷದಲ್ಲಿ ಚಾತುರ್ಮಾಸ್ ಅವಧಿಯು ಸರಿ ಸುಮಾರು ಐದು ತಿಂಗಳುಗಳ ಕಾಲ ಅಂದರೆ 149 ದಿನಗಳ ಕಾಲ ನಡೆಯಲಿದೆ. ಚಾತುರ್ಮಾಸ್ ಪೂರ್ಣಾಹುತಿಗೆ 15 ದಿನಗಳ ಮೊದಲು ಎರಡನೇ ಮತ್ತು ಕೊನೆಯ ತೀರ್ಥಂಕರರಾದ ಭಗವಾನ್ ಮಹಾವೀರ ಸ್ವಾಮಿಗಳ ನಿರ್ವಾಣದ 2550 ನೇ ವರ್ಷದ ಆರಂಭವನ್ನು ಆಚರಿಸುವ ಸಂದರ್ಭವೂ ಇದೆ ವರ್ಷ ನಡೆಯಲಿದೆ.

ಹಿಂದೂ ಪಂಚಾಂಗದ ಪ್ರಕಾರ 2023 ರಲ್ಲಿ 12 ರ ಬದಲಿಗೆ 13 ತಿಂಗಳುಗಳು ಇರಲಿವೆ. ಈ ಕೌತುಕವು ಒಂದೆರಡಲ್ಲ ಬರೋಬ್ಬರಿ 19 ವರ್ಷಗಳ ನಂತರ ನಡೆಯಲಿದೆ. ಅಧಿಕಮಾಸ ಎಂಬುದು ಪ್ರತಿ ಮೂರು ವರ್ಷಗಳಿಗೊಮ್ಮೆ ಬರುತ್ತದೆ. ಇದು ಹಿಂದೂ ಕ್ಯಾಲೆಂಡರ್‌ಗೆ ಹೊಸ ತಿಂಗಳನ್ನು ಸೇರಿಸುವುದನ್ನು ಸೂಚಿಸುತ್ತದೆ. ಸೌರ ವರ್ಷದಲ್ಲಿ 365 ದಿನಗಳು ಮತ್ತು 6 ಗಂಟೆಗಳಿವೆ. ಅದೇ ಚಂದ್ರವರ್ಷದಲ್ಲಿ 354 ದಿನಗಳಿರುತ್ತವೆ. ಎರಡು ವರ್ಷಗಳ ನಡುವೆ, ಸುಮಾರು 11 ಹೆಚ್ಚುವರಿ ದಿನಗಳಿವೆ. ಆದ್ದರಿಂದ ಪ್ರತಿ ಮೂರು ವರ್ಷಗಳಿಗೊಮ್ಮೆ ಒಂದು ಮಾಸ ಬರುತ್ತದೆ. ಹಾಗಾಗಿ ಪ್ರತಿ ಮೂರು ವರ್ಷದಲ್ಲಿ ಒಮ್ಮೆ ಚಂದ್ರಮಾಸ ಬರುತ್ತದೆ. ಅದು ಹೆಚ್ಚುವರಿಯಾಗಿರುವುದಿಂದ ಅದನ್ನು ಅಧಿಕ ಮಾಸ ಎನ್ನಲಾಗುತ್ತದೆ. 

ಇಂತಹ ಸುಸಂಧರ್ಭದಲ್ಲಿ, ಚಾತುರ್ಮಾಸವನ್ನು ತಪಸ್ಸು ಮತ್ತು ಪೂಜೆಯ ಮುಖಾಂತರ ಹೆಚ್ಚಿನ ಒಂದು ತಿಂಗಳುಗಳ ಕಾಲ ಆಚರಿಸಬಹುದಾಗಿದೆ. ಇದರಿಂದಾಗಿ ಈ ವರ್ಷ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಹೇರಳವಾಗಿ ನಡೆಯಲಿವೆ.

ಚಾತುರ್ಮಾಸ ಅವಧಿಯು ಪ್ರತಿ ವರ್ಷ ಸುಮಾರು 120 ದಿನಗಳು:

ಜೈನರ ನಂಬಿಕೆಯ ಪ್ರಕಾರ ಚಾತುರ್ಮಾಸವು ಆಷಾಢ ಶುಕ್ಲ ಚೌಡದಿಂದ ಪ್ರಾರಂಭವಾಗಿ ಕಾರ್ತಿಕ ಪೂರ್ಣಿಮೆಯವರೆಗೆ ಇರುತ್ತದೆ. ಪ್ರತಿ ವರ್ಷ ಚಾತುರ್ಮಾಸವು 120 ದಿನಗಳನ್ನು ಹೊಂದಿರುತ್ತದೆ. ಈ ವರ್ಷ ಅಧಿಕ ಶ್ರಾವಣ ಮಾಸದಿಂದಾಗಿ ಜುಲೈ 2 ರಿಂದ ಪ್ರಾರಂಭವಾಗಿ ನವೆಂಬರ್ 27 ರವರೆಗೆ ಒಟ್ಟು ಚಾತುರ್ಮಾಸಿಕ ಸಮಯವೂ 149 ದಿನಗಳ ಕಾಲ ಇರಲಿದೆ.

Search
Recent News
Leave a Comment:

ಕೃತಿಸ್ವಾಮ್ಯ © ಜೈನ ವಾಣಿ 2024